ಬೆಳಗ್ಗೆ ಎದ್ದಾಗ ಮನೆ ಏಕೋ ಬಿಕೋ...
ನೀ ಇಲ್ಲಿಲ್ಲ..,
'ಬೇಗನೆ ಬಮ್ದ್ಬಿಡ್ತೀನ್ರೀ,'.....
ನಿನ್ನ ವಾಣಿ ಕಿವಿಯೊಳಗೆ
ನಿನ್ನ ತವರು ಅಷ್ಟು ದೂರವೇಕೋ ನಾ ಕಾಣೆ !
ನನ್ನ ಬ್ರಷ್ ಎಲ್ಲಿದೆ?..
ಬೆಳಗಿನಿಂದ ಹುಡುಕಾಟ...
ಟವಲ್ಲೂ ಕಾಣ್ತಾ ಇಲ್ಲ... !
ಅಂತೂ ಸ್ನಾನ, ಪೂಜೆ ಆಗಾಯ್ತು...
ಪ್ರಶ್ನೆ....ಯಾವ ಶಾರ್ಟ್ ಹಾಕಲಿ..?
ಮ್ಯಾಚ್ ಆಗ್ತಿಲ್ಲ
ಛೆ..
ಈ ಸ್ಯಾಕ್ಸ್ ಕೂಡ ಕಾಣ್ತಾಯಿಲ್ಲ್ವಲ್ಲೆ.....?
ಅದೇಗೆ ನೀನು ಇಷ್ಟೆಲ್ಲಾ ಮಾಡ್ತಿದ್ದೆ ಮಾರಾಯ್ತಿ!!
ನಿನ್ನ ಬೈದ ಕ್ಷಣಗಳು ನೆನಪಿಗೆ....
ಕಛೇರಿನಲ್ಲಿ.....ಫೋನ್ ರಿಂಗ್ಗಾದರೆ
ನಿನ್ನ "ರೀ.ಸಂಜೆ ಬೇಗ ಬನ್ರಿ.....ಶ್ಯಾವಿಗೆ ಪಾಯಾಸ ಮಾಡಿದ್ದೀನಿ'......ನೆನಪು., ನಾನು "ನಿಂಗೆ ಹೊತ್ತು ಗೊತ್ತು ಇಲ್ವೇನೇ" ಕುಕ್ಕಿದ ಫೋನು.
ಬೇಗ ಬರಬಾರದೆ...'ಸಂಜೆಯ ಶ್ಯಾವಿಗೆ ಪಾಯಾಸ'..ಅಶೆಯಾಗಿದೆ ಚಿನ್ನು..
ಮನೆಗೆ ಹೊರಟು ,ಮರೆತು ಎಂದಿನ ಮಲ್ಲಿಗೆ ಕೊಂಡು
ಮನೆಯಲ್ಲಿ ನಿನ್ನ ನಗುಮುಖದ ಬಿಸಿ ಕಾಫಿ.... ಮಿಸ್ಸಿಂಗ್
ಮಾಡಿದ ಗಡಿಬಿಡಿ ಕಾಫೀ.....ಉಪ್ಪಿನ ರುಚಿ..
ರಾತ್ರಿ ಹೊಟೆಲ್ ಊಟ...ತ್ಚು..ಅರ್ದವೂ ಇಳಿಯುತಿಲ್ಲ.;
ಮಲಗಿದ್ದವ ಎದ್ದು ಕುಳಿತೆ. ಏಕೋ ನಮ್ಮ ಮದುವೆ ಆಲ್ಬಮ್ ನೋಡುವ ಎನಿಸಿದೆ
ಫೊಟೋದಲ್ಲಿ ನೀನು ಏಕೇ ಅಷ್ಟು ನಾಚಿರುವೆ ಸರೂ...
ಕಟುಕನ ಕುರಿಯಂತೆ ನಿನ್ನ ಕಣ್ಗಳಲ್ಲಿ ಭಯವೆಕೇ..... ನಾನು ಒರಟನೇನೆ?
ಚಿನ್ನು ನಾವು ಇನ್ನೋಮ್ಮೆ ಮದುವೆ ಆಗೋಣಾ....ಬಾ
ನಾಲ್ಕು ಗಂಟೆ ಗೆ ಮಲಗಿ ಎದ್ದು......
ಇನ್ನೂ ಆಗುವುದಿಲ್ಲ.... ಎಂದು...,
ಬಸ್ ಅತ್ಟಿದೆ ; ಮಾವನ ಮನೆಗೆ
ಬಾಗಿಲಲ್ಲಿ ನಿಂತ ಅವಳ ತುಂಟ ನಗು ನೆನಪಿಗೆ..;
Friday, 30 November 2007
Subscribe to:
Post Comments (Atom)
No comments:
Post a Comment